{ads}

ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಚಿಕನ್,ಣ್ಣುಗಳನ್ನು ನೀಡಲಿರುವ ಪಶ್ಚಿಮ ಬಂಗಾಳ ಸರ್ಕಾರ


ಕೊಲ್ಕತ್ತಾ:-

ಜನವರಿಯಿಂದ ಏಪ್ರಿಲ್ ವರೆಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಚಿಕನ್ ಮತ್ತು ಹಣ್ಣುಗಳನ್ನು ನೀಡಲು ಪಶ್ಚಿಮ ಬಂಗಾಳ ಸರ್ಕಾರವು ನಿರ್ಧರಿಸಿದ್ದು ಮಂಗಳವಾರ ಈ ಕುರಿತು ಆದಿಸೂಚನೆ ಹೊರಡಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಆದಿಸೂಚನೆಯಂತೆ ವಾರಕ್ಕೆ ಒಂದು ದಿನ ಚಿಕನ್ ಮತ್ತು ಹಣ್ಣುಗಳನ್ನು ನೀಡಲು 371 ಕೋಟಿ ರೂಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನೂ ಇದು ಅನ್ನ, ಬೇಳೆಕಾಳು, ತರಕಾರಿಗಳು, ವಯೋಬಿನ್ ಮತ್ತು ಮೊಟ್ಟೆಗಳನ್ನು ಹೊಂದಿರುವ ಮಧ್ಯಾಹ್ನದ ಊಟದ ಹಾಲಿ ಮೆನುವಿಗೆ ಹೆಚ್ಚುವರಿ ಆಗಲಿದೆ.

 ಈ ಯೋಜನೆಯನ್ನು ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಎಂದು ಕರೆಯಾಗುತ್ತಿರುವ ಮಧ್ಯಾಹ್ನದ ಊಟದ ಯೋಜನೆಯಲ್ಲಿ ದಾಖಲಾಗಿರುವ ಪ್ರತಿ ವಿದ್ಯಾರ್ಥಿಗೆ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಒದಗಿಸಲು ವಾರಕ್ಕೆ 20 ರೂ. ವೆಚ್ಚ ಮಾಡಲಾಗುವುದು ಮತ್ತು ಇದು 16 ವಾರಗಳ ಕಾಲ ಮುಂದುವರಿಸುತ್ತದೆ ಎಂದು ಆದಿಸೂಚನೆಯಲ್ಲಿ ಹೇಳಲಾಗಿದೆ.

 ಪಶ್ಚಿಮ ಬಂಗಾಳದಲ್ಲಿ ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ 1.16 ಕೋಟಿ ರೂಗು ಅಧಿಕ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯ ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಿವೆ. ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿರುವ 371 ಕೋಟಿ ರೂಗಳ ಒರೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಬರಸಿಲ್ಲದೆ ಎಂದು ಆದಿಸೂಚನೆಯಲ್ಲಿ ಹೇಳಲಾಗಿದೆ.

ಮೇಲಿನ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಮತ್ತು ಸಪೋರ್ಟ್ ಮಾಡಿ ಧನ್ಯವಾದಗಳು

Post a Comment

0 Comments
* Please Don't Spam Here. All the Comments are Reviewed by Admin.