{ads}

ಪರೀಕ್ಷಾ ಕೊಠಡಿಯಲ್ಲಿ ಶಿಕ್ಷಕನಿಗೆ ವಿದ್ಯಾರ್ಥಿಯಿಂದ ಚಾಕು ಇರಿತ, ಶಿಕ್ಷಕ ಆಸ್ಪತ್ರೆಗೆ ದಾಖಲು



ದೆಹಲಿ:-

ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಂದ ನಡೆದ ದಾಳಿಗಳ ಕುರಿತು ವರದಿಯಾಗಿದೆ. ಇದೀಗ ಬೆಚ್ಚಿ ಬೀಳಿಸುವ ಘಟನೆ ಒಂದು ದೆಹಲಿಯಲ್ಲಿ ನಡೆದಿದೆ. ಪ್ರಾಕ್ಟಿಕಲ್ ಎಕ್ಸಾಮಿಗೆ ವಿಲ್ಲ ವಿದ್ಯಾರ್ಥಿಗಳು ಕೊಠಡಿಯಲ್ಲಿ ಹಾಜರಾಗಿದ್ದರು. ಪರೀಕ್ಷೆ ಕೂಡ ಆರಂಭಗೊಂಡಿತ್ತು.

ಇತ್ತ ಪರೀಕ್ಷಾ ಕೊಠಡಿಯ ಶಿಕ್ಷಕ ಎಲ್ಲ ವಿದ್ಯಾರ್ಥಿಗಳ ಮೇಲೆ ನಿಗಾ ವಯಸ್ಸಿದ್ದರು. ಪರೀಕ್ಷಾ ಕೊಠಡಿಯಲ್ಲಿ ಪರಿಶೀಲನೆ ನಡೆಸುತ್ತಾ ನಡೆದಾಡುತ್ತಿದ್ದ ಶಿಕ್ಷಕನ ಮೇಲೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಏಕಾಏಕಿ ದಾಳಿ ಮಾಡಿದ್ದಾನೆ. ತಾನು ತಂದಿದ್ದ ಚಾಕು ಹಿಡಿದು ಶಿಕ್ಷಕನ ಹೊಟ್ಟೆಗೆ ಚುಚ್ಚಿದ್ದಾನೆ. ವಿದ್ಯಾರ್ಥಿಯ ಹಿರಿತಕ್ಕೆ ಶಿಕ್ಷಕ ನೆಲಕ್ಕೆ ಹೊರಳಿದ್ದಾನೆ. ಇತ್ತ ಇತರ ವಿದ್ಯಾರ್ಥಿಗಳು ತೀರಿಕೊಂಡಿದ್ದಾರೆ. ಗಾಬರಿಗೊಂಡ ವಿದ್ಯಾರ್ಥಿ ಓಡಿ ಹೋಗಲು ಯತ್ನಿಸಿದ್ದಾನೆ, ಆದರೆ ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದೆಹಲಿಯ ಇಂದೋರ್ ಪೂರಿ ವಲಯದಲ್ಲಿ ನಡೆದಿದೆ.

ವಿದ್ಯಾರ್ಥಿಗಳ ಪರೀಕ್ಷಾ ವಿಜಲೆಂಟ್ ಆಗಿ ಶಿಕ್ಷಕ ಭೂದೇವ್ ಜವಾಬ್ದಾರಿ ವಹಿಸಿಕೊಂಡಿದ್ದರು. ಎಲ್ಲಾ ವಿದ್ಯಾರ್ಥಿಗಳು ಸಮಯಕ್ಕೆ ಹಾಜರಾಗಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಚಾಕು ಇರಿದ ವಿದ್ಯಾರ್ಥಿ ಕೂಡ ಪರೀಕ್ಷೆಗೆ ಹಾಜರಾಗಿದ್ದಾನೆ. ಆದರೆ ಈತ ಕೊಠಡಿಯೊಳಗೆ ಬರುವಾಗಲೇ ಚಾಕು ಸಮೇತ ಬಂದಿದ್ದ. ಪರೀಕ್ಷೆ ಆರಂಭಗೊಂಡ ಕೆಲಕ್ಷಣದಲ್ಲಿ ಈ ದಾಳಿ ನಡೆದಿದೆ.

ಯಾವುದೇ ಅರಿವಿಲ್ಲದೆ ತಿರುಗಾಡುತ್ತಿದ್ದ ಶಿಕ್ಷಕನ ಹೊಟ್ಟೆಗೆ ಚಾಕು ಇರಿದಿದ್ದಾನೆ. ಇದರಿಂದ ಶಿಕ್ಷಕ ಭೂದೇವ್ ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿಗಳು ಭೂದೇವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿ ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಬಾಲಕನ ವಿರುದ್ಧ ಕೊಲೆ ಯತ್ನ ಐಪಿಸಿ ಸೆಕ್ಷನ್ 307 ರಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ. ಈ ರೀತಿ ಭೀಕರ ದಾಳಿಗೆ ಯಾವ ಶಿಕ್ಷೆ ಅನ್ನೋ ಕುರಿತು ಬಾಲಾಪರಾಧಿ ಕಾಯ್ದೆಯಲ್ಲಿ ಉಲ್ಲೇಖವಿಲ್ಲ.


ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ (Kannada News 24)

Tags

Post a Comment

0 Comments
* Please Don't Spam Here. All the Comments are Reviewed by Admin.