{ads}

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಅನ್ಯಕೋಮಿನ ಯುವಕ: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ



ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ.

ತೇಜಸ್ವಿನಿ ಗಂಗಪ್ಪ ಗುಜ್ಜರ್ (21) ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ. ಆಶೀಫ್ ದೇಸಾಯಿ ಎಂಬುವವನು ಪ್ರೀತಿಸಿ ಕೈಕೊಟ್ಟಿರವ ಯುವಕ. ಕಳೆದ ಎರಡು ವರ್ಷದಿಂದ ಪ್ರೀತಿಯ ನಾಟಕವಾಡುತ್ತಿದ್ದ ಆಶೀಫ್, ಕೊನೆಗೆ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದ. ಈ ಹಿನ್ನೆಲೆ ಮನನೊಂದಿದ್ದ ಯುವತಿ ಕಳೆದ ಮೂರು ದಿನಗಳ ಹಿಂದೆ ಕೀಟನಾಶಕ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗಳ ಸಾವಿಗೆ ಆಶೀಫ್ ಕಾರಣ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿಂದೆಯೂ ಹಾಪ್ ಮರ್ಡರ್ ಕೇಸ್​ನಲ್ಲಿ ಆಶೀಫ್ ಜೈಲಿಗೆ ಹೋಗಿ ಬಂದಿದ್ದ. ಆಶೀಫ್‌ಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆರೋಪಿ ಆಶೀಪ್ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆ ಇದ್ದರೆ ಈ ಜ್ಯೂಸ್ ಕುಡಿಯಿರಿ



ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಚಳಿಗಾಲದಲ್ಲಿ ಕೂದಲು ಒಣಗುತ್ತದೆ, ಇದರಿಂದ ತಲೆಹೊಟ್ಟು ಉಂಟಾಗಿ ಕೂದಲಿನ ಬುಡ ದುರ್ಬಲವಾಗುತ್ತದೆ. ಇದರಿಂದ ಕೂದಲುದುರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಜ್ಯೂಸ್ ಕುಡಿಯಿರಿ.

ಚಳಿಗಾಲದಲ್ಲಿ ಎಬಿಸಿ ಜ್ಯೂಸ್ ಕುಡಿಯಿರಿ. ಇದಕ್ಕೆ ಆಮ್ಲಾ, ಬೀಟ್ ರೋಟ್, ಕ್ಯಾರೆಟ್ ಜೊತೆಗೆ ಇದಕ್ಕೆ ಒಣದ್ರಾಕ್ಷಿ, ಪುದೀನಾ ಎಲೆಗಳು, ಶುಂಠಿ, ನಿಂಬೆ, ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ. ಇದನ್ನು ಬೆಳಗಿನ ಉಪಹಾರದಲ್ಲಿ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಊಟದ ನಡುವೆ ಸೇವಿಸಿ.

ಇದನ್ನು ಸೇವಿಸುವುದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುವುದಲ್ಲದೇ , ಇದರಿಂದ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.



Tags

Post a Comment

0 Comments
* Please Don't Spam Here. All the Comments are Reviewed by Admin.