ಕನ್ನಡ ನ್ಯೂಸ್-24
ಬೆಂಗಳೂರು: ಶೇಕಡ.50% ಗಿಂತ ಕಡಿಮೆ ಫಲಿತಾಂಶ ಪಡೆದ BBMP ಯ ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ ನಿಯೋಜನೆ ಮಾಡಿಕೊಂಡಿದ್ದ ಶಾಲಾ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಪೈಕಿ 72 ಮಂದಿಯ ನಿಯೋಜನೆ ರದ್ದು ಮಾಡಲಾಗಿದೆ.
ಇವರಲ್ಲಿ 35 ಅತಿಥಿ ಶಿಕ್ಷಕರು, ಉಪನ್ಯಾಸಕರು ನಿಗದಿತ ವಿದ್ಯಾರ್ಹತೆ ಹೊಂದಿಲ್ಲ.
ಉಳಿದ 37 ಮಂದಿ ಕಳೆದ 3 ವರ್ಷದಲ್ಲಿ SSLC ಹಾಗೂ 2nd PUC ಯಲ್ಲಿ ಶೇಕಡ. 50% ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಾರೆ. ಹೀಗಾಗಿ ಗೌರವಧನ ಮಂಜೂರಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಶಾಲಾ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಮಾತ್ರ ಶಿಕ್ಷೆ ನೀಡುತ್ತಿಲ್ಲ. BBMP ಶಾಲಾ ಮತ್ತು ಕಾಲೇಜಿನ ಕಾಯಂ ಶಿಕ್ಷಕರು ಉಪನ್ಯಾಸಕರಿಗೂ ಬಡ್ತಿ ತಡೆ, ವರ್ಗಾವಣೆ ಶಿಕ್ಷೆ ವಿಧಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯ ಆಯುಕ್ತರಿಗೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.
ಕಳೆದ ಸಾಲಿನಲ್ಲಿ BBMP ಯ ಶಾಲಾ ಶಾಲಾ ಕಾಲೇಜುಗಳಿಗೆ ಶಿಕ್ಷಣ ಇಲಾಖೆ ಮಾದರಿಯಲ್ಲಿ SDMC ಮತ್ತು DCC ಮೂಲಕ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಈ ಬಾರಿಯೂ 804 ಮಂದಿ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿಯೋಜನೆಗೊಂಡ 804 ಮಂದಿಯಲ್ಲಿ 35 ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ವಿದ್ಯಾರ್ಥಿ ಹೊಂದಿಲ್ಲದಿರುವುದು ದಾಖಲಾತಿಯ ಪರಿಶೀಲನೆಯ ವೇಳೆ ಕಂಡು ಬಂದಿದೆ.
ಧನ್ಯವಾದಗಳು....
