ಸರ್ಕಾರಿ ಶಾಲಾ ಶಿಕ್ಷಕಿಯ ದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾದ ಘಟನೆ ಆಂಧ್ರಪ್ರದೇಶದ ಏಲೂರಿನಲ್ಲಿ ಸೋಮವಾರ ನಡೆದಿದೆ.
ನೂಜಿವೀಡು ಸಮೀಪದ ಬತ್ತುಲವಾರಿಗುಡೆಂ ಗ್ರಾಮದ ನಿವೃತ್ತ ಕಂದಾಯ ನಿರೀಕ್ಷಕ ಮಂದಾಡ ಲಕ್ಷ್ಮಯ್ಯ ಮತ್ತು ಪ್ರಭಾವತಿ ಅವರ ಪುತ್ರಿ ದೇವಿಕಾ ಮಂದಾಡ (38) ಮೃತೆ ಶಿಕ್ಷಕಿ.
20 ವರ್ಷಗಳ ಹಿಂದೆ ಪೆದಪದವು ಮಂಡಲದ ನಾಯ್ಡುಗುಡೆಂ ಗ್ರಾಮದ ಚಿನ್ನಿ ಸುರೇಂದ್ರಕಿಚ್ಚಿ ಎಂಬುವರ ಜತೆ ವಿವಾಹವಾಗಿತ್ತು. ಅವರಿಗೆ ಪವನ್ ತೇಜ ಮತ್ತು ಗೌತಮ್ ಎಂಬ ಎರಡು ಗಂಡು ಮಕ್ಕಳಿದ್ದಾರೆ.
ಶಾಲಾ ಶಿಕ್ಷಕಿ ದೇವಿಕಾ ಉಂಗುಟೂರು ಮಂಡಲದ ನಲ್ಲಮಡುವಿನಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿವರ್ಹಿಸುತ್ತದ್ದರು. ಆಕೆಯ ಗಂಡ ಸುರೇಂದ್ರ ಕಿಚ್ಚಿ ಖಾಸಗಿ ಶಾಲೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. 5 ವರ್ಷಗಳ ಹಿಂದೆ ಅಪಾರ್ಟ್ಮೆಂಟ್ವೊಂದರಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇದನ್ನು ನೋಡಲು ಗಂಡ ಸುರೇಂದ್ರ ಹೋಗಿದ್ದರು. ಸಂಜೆ ಹಿಂತಿರುಗಿ ಮನೆಗೆ ಬಂದಾಗ ಪತ್ನಿ ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸ್ಥಿತಿಯಲ್ಲಿ ಶವ ನೋಡಿದ ಸುರೇಂದ್ರ ಚಾಕುವಿನಿಂದ ತನ್ನನ್ನು ಚುಚ್ಚಿಕೊಳ್ಳುವ ಮೂಲಕ ಹಾನಿ ಮಾಡಿಕೊಂಡಿದ್ದಾನೆ. ಆತನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಈ ಘಟನೆಗೆ ನಿಖರವಾದ ಕಾರಣ ಗೊತ್ತಿಲ್ಲವಾದರೂ, ಶಿಕ್ಷಕಿ ದೇವಿಕಾ ಹುಟ್ಟು ಹಬ್ಬ ಹಿನ್ನೆಲೆ ಅವರ ಮಕ್ಕಳು ಅಮ್ಮನಿಗೆ ಶುಭಾಶಯ ಹೇಳಲು ಕರೆ ಮಾಡಿದ್ದಾರೆ. ಆದರೆ, ದೇವಿಕಾ ಕರೆ ಸ್ವೀಕಾರ ಮಾಡಿಲ್ಲ. ಈ ಹಿನ್ನೆಲೆ ದೊಡ್ಡಪ್ಪನಿಗೆ ಮಕ್ಕಳು ಕರೆ ಮಾಡಿದ್ದಾರೆ. ಬಳಿಕ ದೊಡ್ಡಪ್ಪ, ದೇವಿಕಾ ಮನೆಗೆ ಹೋಗಿ ನೋಡಿದಾಗ ಸುರೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ದೇವಿಕಾ ದೇಹ ಆತ್ಮಹತ್ಯೆ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾವಿನ ಬಗ್ಗೆ ಅನುಮಾನಗಳು..!
ತಂದೆ ಲಕ್ಷ್ಮಯ್ಯ ತಮ್ಮ ಮಗಳು ದೇವಿಕಾ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.
