ಕನ್ನಡ ನ್ಯೂಸ್ - 24:-
ನವೆಂಬರ್ 4, 2025ರ ಮಂಗಳವಾರದ ನಿತ್ಯದರ್ಶಿ ರಾಶಿ ಭವಿಷ್ಯ ಪ್ರಕಟವಾಗಿದೆ. ಮೇಷ ರಾಶಿಯವರಿಗೆ ತಾಯಿಯಿಂದ ಮನಸ್ಸಿಗೆ ಒತ್ತಡ ಉಂಟಾಗಲಿದೆ. ವೃಷಭ ರಾಶಿಯವರಿಗೆ ವಾಹನ, ಭೂಮಿ ಖರೀದಿಯ ಯೋಗವಿದೆ. ಮಿಥುನ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ಕರ್ಕಾಟಕ ರಾಶಿಯವರಿಗೆ ಹೊಸ ಯೋಜನೆಗಳಿಂದ ಅಭಿವೃದ್ಧಿ ಕಾಣಲಿದೆ. ಸಿಂಹ ರಾಶಿಯವರಿಗೆ ಗುರಿ ತಲುಪುವಲ್ಲಿ ಅಡಚಣೆ ಬರಲಿದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಬರಲಿದೆ. ತುಲಾ ರಾಶಿಯವರಿಗೆ ಆರ್ಥಿಕ ಆದಾಯ ಹೆಚ್ಚಾಗಲಿದೆ. ವೃಶ್ಚಿಕ ರಾಶಿಯವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಧನು ರಾಶಿಯವರಿಗೆ ಅನುಭವಿಗಳ ಮಾರ್ಗದರ್ಶನ ಅಗತ್ಯ.
ಮೇಷ ರಾಶಿ:-
- ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಒಳ್ಳೆಯ ದಿನವಾಗಿರಲಿದೆ. ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಆರ್ಥಿಕವಾಗಿಯು ಈ ದಿನ ಉತ್ತಮವಾಗಿದೆ, ಇನ್ನು ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡುವ ಮುನ್ನ ಜಾಗ್ರತೆವಹಿಸಿ.
ವೃಷಭ ರಾಶಿ:-
- ಇನ್ನು ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ಸು ದೊರೆಯಲಿದೆ, ಹೀಗಾಗಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಪರಿಹಾರ ಪಡೆಯುತ್ತೀರಿ. ದೂರ ಪ್ರಯಾಣ ಮಾಡುವ ಸಂಭವವಿದೆ. ಕುಟುಂಬಸ್ಥರಿಂದ ಕಹಿ ಸುದ್ದಿಯ ಕೇಳುವಿರಿ. ಕಠಿಣ ನಿರ್ಧಾರ ಮಾಡುವ ಮುನ್ನ ಎಚ್ಚರವಿಡಿ.
ಮಿಥುನ ರಾಶಿ:-
- ಕೆಲಸದಲ್ಲಿ ನೀವು ಬಯಸಿದ ಫಲ ಸಿಗಲಿದೆ, ಆರ್ಥಿಕವಾಗಿಯೂ ಈ ದಿನ ನಿಮಗೆ ಉತ್ತಮವಾಗಿದೆ, ಯಾವುದೇ ಹೂಡಿಕೆ ಮಾಡುವ ಮುನ್ನ ಜಾಗ್ರತೆವಹಿಸಿ. ಹಣಕಾಸಿನ ಓಡಾಟ ಚೆನ್ನಾಗಿರುವ ಕಾರಣ ಹೆಚ್ಚು ಹಣ ಖರ್ಚಿಗೆ ನೀವು ಮುಂದಾಗಬಹುದು.
ಕರ್ಕ ರಾಶಿ:-
- ವ್ಯಾಪಾರಿಗಳ ವ್ಯಾಪಾರ ವಹಿವಾಟು ಚೆನ್ನಗಿರಲಿದೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ಅಗತ್ಯಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಲೇಬೇಡಿ. ಬೇರೆಯವರಿಗೆ ಹಣ ನೀಡುವ ಮುನ್ನ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ:-
- ತುಂಬಾ ಸಮಯದಿಂದ ಯಾವುದೇ ಕೆಲಸ ಬಾಕಿ ಉಳಿದಿದ್ದರೆ, ಅದನ್ನು ಇಂದು ಪೂರ್ಣಗೊಳಿಸಲು ಪ್ರಯತ್ನಿಸಿ, ಬೇರೆ ಕೆಲಸದ ನಿಮಿತ್ತ ಹೊಸ ಸ್ಥಳಕ್ಕೆ ತೆರಳುವ ಸಾಧ್ಯತೆ ಇದೆ. ಕೆಲಸದಲ್ಲಿ ಏಕಾಗೃತೆ ಇರಲಿ. ನಿಮ್ಮ ಶತ್ರುಗಳ ಬಗ್ಗೆ ಈ ದಿನ ಎಚ್ಚರದಿಂದ ಇರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕನ್ಯಾ ರಾಶಿ:-
- ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಮನೆಯ ಖರ್ಚು ಹೆಚ್ಚಾಗಬಹುದು. ಅವಿತರಿಗೆ ಒಳ್ಳೆಯ ಸುದ್ದಿ ಕಾದಿದೆ. ಆಸ್ತಿ ಸಂಬಂಧಿಸಿದ ಹಲವು ಯೋಜನೆಗಳು ಸಾಕಾರವಾಗಲಿದೆ. ಧನ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದರೆ ಫಲ ನೀಡಲಿದೆ.
ತುಲಾ ರಾಶಿ:-
- ಬಹುಕಾಲದಿಂದ ನಿಮ್ಮ ನಡುವೆ ಇದ್ದ ವೃತ್ತಿ ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ. ಆದಾಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಸ್ವಲ್ಪ ಮುನಿಸು ಇರಬಹುದು. ಅನಗತ್ಯ ಗಲಾಟೆ, ಚರ್ಚೆಯಲ್ಲಿ ಇಂದು ತೊಡಗಬೇಡಿ.
ವೃಶ್ಚಿಕ ರಾಶಿ:-
- ನಿಮ್ಮ ಕೆಲಸದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ನೀವು ಸಾಲ ಮಾಡಿದ್ದರೆ ಸಾಧ್ಯವಾದಷ್ಟು ಬೇಗ ಅದನ್ನು ಮರುಪಾವತಿಸಲು ಪ್ರಯತ್ನಿಸಿ. ಒಳ್ಳೆಯ ಕೆಲಸಕ್ಕಾಗಿ ಇಂದು ನೀವು ಖರ್ಚು ಮಾಡಬೇಕಾದ ಸ್ಥಿತಿ ಬರಬಹುದು. ಆದರೆ ಅದರ ಫಲ ಉತ್ತಮವಾಗಿರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಧನು ರಾಶಿ:-
- ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ಇಂದು ಶುಭ ಗಳಿಗೆಯಾಗಲಿದೆ. ಹೊಸ ಕೆಲಸ ಹುಡುಕುತ್ತಿದ್ದರೆ ಹೊಸ ಸುದ್ದಿ ಕೇಳುವಿರಿ. ಸಂಬಂಧಿಕರು ಮನೆಗೆ ಭೇಟಿ ನೀಡುವ ಸಂಭವವಿದೆ. ಆಸ್ತಿ, ದಾಖಲೆ, ವಾಹನ ಸಂಬಂಧಿ ಸಮಸ್ಯೆಗಳು ಬಗೆಹರಿಯಲಿದೆ.
ಮಕರ ರಾಶಿ:-
- ಬಹಳ ಸಮಯದ ನಂತರ, ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದು. ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸುವ ಮೊದಲು ಎಚ್ಚರಿಕೆ ಅಗತ್ಯ. ಸ್ನೇಹಿತರೊಬ್ಬರ ದಿಢೀರ್ ಭೇಟಿ ನಿಮ್ಮಲ್ಲಿ ಕಳವಳದ ಜೊತೆಗೆ ಸಂತಸ ತರಲಿದೆ.
ಕುಂಭ ರಾಶಿ:-
- ಸಣ್ಣ ವ್ಯಾಪಾರಿಗಳಿಗೆ ಇಂದು ಧನಲಾಭದ ನಿರೀಕ್ಷೆ ಇದೆ. ಇಂದು ಚಿನ್ನ ಬೆಳ್ಳಿ ಖರೀದಿಸುವ ಆಲೋಚನೆಯಲ್ಲಿದ್ದರೆ ನಿಮಗೆ ಉತ್ತಮ ದಿನವಾಗಿರಲಿದೆ. ವಾಹನ ಚಾಲಕರು ಎಚ್ಚರದಿಂದ ಇರಿ. ಅನಿರೀಕ್ಷಿತ ಅನಾರೋಗ್ಯ ಕಾಡಬಹುದು.
ಮೀನ ರಾಶಿ:-
- ವಿದ್ಯಾರ್ಥಿಗಳಿಗೆ ಈ ದಿನ ಶುಭವಾಗಲಿದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವುದನ್ನು ಮುಂದೂಡಬೇಡಿ. ಮನಸ್ಸಿನಲ್ಲಿ ಯಾವುದೇ ತಳಮಳವಿದ್ದರೆ ನಿಮ್ಮ ಆಪ್ತರಿಂದಸಲಹೆ ಪಡೆಯಿರಿ. ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಲಾಭ ದೊರೆಯಲಿದೆ. ನಿಮ್ಮ ಸಂಗಾತಿ ಜೊತೆಗೆ ಬಾಂದವ್ಯ ಮತ್ತಷ್ಟು ವೃದ್ಧಿಸಲಿದೆ.
